- Arathi B R
ವಿಸ್ಮಯ ಕಲಿಕೆಯ ವಿಸ್ಮಯ ಕ್ಷಣಗಳು
ನಾನು ಒಬ್ಬ ಶಿಕ್ಷಕಿಯಾಗಿ ಸುಮಾರು ಶಾಲೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿನ ವಿದ್ಯಾಭ್ಯಾಸ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ನಮ್ಮ ಸಂಸ್ಕೃತಿ, ಸಂಪ್ರದಾಯ ವ್ಯಕ್ತಿತ್ವ ವಿಕಾಸನ ಇವುಗಳಿಂದ ದೂರ ಉಳಿದಿದೆ ಖಾಸಗಿ ಶಾಲೆಗಳು ಇದನ್ನೇ ಬಂಡವಾಳವಾಗಿಸಿಕೊಂಡು ವ್ಯಾಪಾರತಾಣಗಳಾಗಿವೆ.
ನಮ್ಮ ಮಕ್ಕಳನ್ನು ನಾವು ನಮ್ಮ ನಗರೀಕರಣದ ಆರ್ಭಟದಲ್ಲಿ ನಮ್ಮ ಯಾಂತ್ರಿಕ ಜೀವನದಲ್ಲಿ ನಮ್ಮ ಯಂತ್ರಗಳ ತರಹ ಬಳಸುತಿದ್ದೇವೆ, ಅವರಿಗೂ ಒಂದು ಮನಸ್ಸಿದೆ ಎಂಬುದನ್ನು ಮರೆತು ಬಿಟ್ಟಿದ್ದೇವೆ, ತಂದೆ ತಾಯಿ ಇಬ್ಬರು ಹೊರಗಡೆ ಹೋಗಿ ದುಡಿಯುವುದು ಅನಿವಾರ್ಯವಾಗಿದೆ ಆದ್ದರಿಂದ ಮಕ್ಕಳ ಬಗ್ಗೆ ಗಮನ ಕೊಡದೆ ಖಿನ್ನತೆಗೆ ಒಳಗಾಗಿರುವ ಎಷ್ಟೋ ಮಕ್ಕಳಿದ್ದಾರೆ.
ಇನ್ನು ಶಾಲೆಗಳಲ್ಲಿ ಕೇವಲ ಹೆಚ್ಚಿನ ಅಂಕ ತೆಗೆಯಬೇಕೆಂದು ಮಕ್ಕಳಿಗೆ ಒತ್ತಡ ಹಾಕಿ ಉತ್ತಮ ಅಂಕ ತೆಗೆದರೆ ಮಾತ್ರ ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲಾಗುತ್ತಿದೆ ಜೀವನ ರೂಪಿಸಿಕೊಳ್ಳುವ ಯಾವುದೇ ರೀತಿಯ ತರಬೇತಿ ವಿದ್ಯಾಬ್ಯಾಸದಲ್ಲಿ ಬರುವುದಿಲ್ಲ, ಎಳೆವಯಸ್ಸಿನ ಮಕ್ಕಳಿಗೆ ಸ್ವತಂತ್ರವಿಲ್ಲದಾಗಿದೆ ಚಟುವಟಿಕೆ ಹಾಗು ಸ್ವಂತ ಯೋಚನೆಗೆ ಪ್ರೇರಣೆ ಇಲ್ಲದೆ ಮತ್ತು ಎಲ್ಲರ ಜೋತೆ ಸಂತೋಷದಿಂದ ಕಾಲ ಕಳೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.
ಅವಿಭಕ್ತ ಕುಟುಂಬದಲ್ಲಿ ತಾತ ಅಜ್ಜಿ ಕತೆ ಹೇಳಿ ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟು ಎಲ್ಲರ ಜೊತೆ ಗೌರವದಿಂದ ಹೊಂದಿಕೊಳ್ಳುವ ನಡತೆಯನ್ನು ಕಲಿಸುತಿದ್ದರು ಆಟಗಳು ಆಡುತ್ತ ಬುದ್ದಿ ಚುರುಕಾಗಿ ಪ್ರತಿಬಾವಂತರಾಗಿ ಬೆಳೆಯುತಿದ್ದರು.
ನಮ್ಮ ವಿಸ್ಮಯ ಕಲಿಕೆಯಲ್ಲಿ ಆಟದ ಜೊತೆಗೆ ಪಾಠ ಕಲಿಯುವುದೇ ನಮ್ಮ ಉದ್ದೇಶ ಎರಡು ವರ್ಷಗಳಲ್ಲಿ ನಮ್ಮಲ್ಲಿ ಮ್ನಕ್ಕಳು ಸಾಕಷ್ಟು ಬದಲಾವಣೆ ಆಗಿರುವುದನ್ನು ನಾವು ಕಾಣಬಹುದು ಮಕ್ಕಳಿಗೆ ಸ್ವತಂತ್ರ ಕೊಟ್ಟರೆ ಅವರ ಮನಸ್ಸು ಚಟುವಟಿಕೆಗಳಲ್ಲಿ ತೊಡಗಿ ಸ್ವಂತ ಯೋಚನೆ ಮಾಡುತ್ತಾರೆ ಆಟ ಪಾಠ ಕತೆ ಮನೋರಂಜನೆ ಇವುಗಳೆಲ್ಲ ಮಾನವನ ಬೆಳವಣಿಗೆಗೆ ಮಹತ್ವ ಪೂರ್ಣ ಪಾತ್ರ ವಹಿಸುತ್ತದೆ ಅವರಲ್ಲಿ ಕೌಶಲ್ಯ ಹೆಚ್ಚಾಗಿ ಒಬ್ಬ ಉತ್ತಮ ವಿದ್ಯಾರ್ಥಿಯಾಗಿ ಮಾರ್ಪಾಡಾಗುತ್ತಾನೆ.
ಉದಾಹರಣೆಗೆ ದಿನೇಶ್ ಎನ್ನುವವನು ತುಂಬಾ (ತುಂಟ) ಒರಟು ಸ್ವಭಾವದವನು ಇವನು ಈಗ ಕಲಿಕೆಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದಾನೆ ಮತ್ತು ಮಕ್ಕಳಿಗೆ ಧ್ಯಾನ ಮಾಡಿಸುವಾಗ ನನ್ನ ಪಕ್ಕ ಬಂದು ಕುಳಿತು ತಾನೇ ಕಣ್ಣು ಮುಚ್ಚಿ ಸ್ವಲ್ಪ ಸಮಯ ಕುಳಿತುಕೊಳ್ಳುತ್ತಾನೆ ನಮ್ಮ ಮನಸು ಚಂಚಲ ಧ್ಯಾನ ಮಾಡುವುದು ಕಷ್ಟದ ಕೆಲಸ ನಮ್ಮ ಸಂಸ್ಥೆಯ ಕಲಿಕೆಯ ವಿಧಾನವನ್ನು ಇಲ್ಲಿ ಇವನ ಬದಲಾವಣೆಯನ್ನು ನೋಡಿ ನಾವು ಘಮನಿಸಬೇಕು.
ಲಕ್ಷ್ಮಿ, ಶಾಲಿನಿ ಇವರು ಸುಮ್ಮನೆ ಇರುತ್ತಾರೆ ಹೆಚ್ಚು ಮಾತನಾಡುವುದಿಲ್ಲ ಎಂದು ಅವರ ಪೋಷಕರು ಹೇಳುತಿದ್ದರು ಈಗ ಅವರು ಎಲ್ಲರ ಜೊತೆ ಆಟ ಆಡುತ್ತಾರೆ ಚಿತ್ರಕಲೆ ಇನ್ನಿತರೇ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲಿಕೆಯಲ್ಲಿ ಕೂಡ ಮುಂದಿದ್ದಾರೆ ಎಲ್ಲಾ ಮಕ್ಕಳು ಸಂತೋಷದಿಂದ ಇರುತ್ತಾರೆ,
ನಮ್ಮಲ್ಲಿ ಮಕ್ಕಳು ಶಾರೀರಿಕ ಮಾನಸಿಕ ಶೈಕ್ಷಣಿಕ ಸಾಮಾಜಿಕವಾಗಿ ಕಲಿಕೆ (ಓದು) ಯಲ್ಲಿ ಕೂಡ ಮುಂದಿದ್ದಾರೆ ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡಲು ನಿಜಕ್ಕೂ ಹೆಮ್ಮೆ ಅನಿಸುತ್ತದೆ ಸಮಯದ ಪರಿವೆ ಇರುವುದಿಲ್ಲ ಕೌಟುಂಬಿಕ ವಾತಾವರಣದಿಂದ ಕುಡಿದೆ ಮಕ್ಕಳು ಚಟುವಟಿಕೆಗಳಲ್ಲಿ ಭಾಗವಹಿಸಿ ಮನೋಸ್ಥೈರ್ಯದಿಂದ ಕಲಿಕೆಯಲ್ಲಿ ಮುಂದಿದ್ದಾರೆ ಯಾವಾಗಲು ಸಂತೋಷ ಸಂಭ್ರಮದ ವಾತಾವರಣದಿಂದ ಕೂಡಿರುತ್ತದೆ ಈ ನಮ್ಮ ವಿಸ್ಮಯ ಕಲಿಕೆ ಕೇಂದ್ರ.