top of page
Search
  • Venkatesh Naik

ನಮ್ಮ ಕಲಿಕೆಯಲ್ಲೊಂದು ವಿಸ್ಮಯ

ನಮ್ಮ ದೇಶದಲ್ಲಿ ಶಿಕ್ಷಣದ ವ್ಯವಸ್ಥೆಯಲ್ಲಿ ಹಲವಾರು ರೀತಿಯ ವಿಧಾನವನ್ನು ನೋಡುತ್ತೇವೆ ಕೊಠಡಿಯ ಒಳಗಡೆ ನಡೆಯುವಂತಹ ಶಿಕ್ಷಣ, ಕೊಠಡಿಯ ಹೊರಗಡೆ ನಡೆಯುವಂತಹ ಶಿಕ್ಷಣ ಮತ್ತು ದೂರ ಶಿಕ್ಷಣ, ಹೀಗೆ ಇರುವಾಗ ನಾವು ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು ಸರಿಯಾದ ರೀತಿಯಲ್ಲಿ ತಾಳೆ ಹಿಡಿದು ನೋಡದೆ ನಮಗೆ ಮನೆಯ ಹತ್ತಿರ ಇರುವ ಯಾವುದೇ ಶಾಲೆ ಇರಲಿ ಅದರಲ್ಲಿ ವಿಶೇಷವಾಗಿ ಖಾಸಗಿ ಶಾಲೆಯಲ್ಲಿ ನಾವು ಮಕ್ಕಳನ್ನು ದಾಖಲಾತಿ ಮಾಡಿ ಕೈ ಬಿಡುತ್ತೇವೆ, ಇದರಿಂದ ಮಕ್ಕಳ ಆಸಕ್ತಿ ಮಕ್ಕಳ ಅಬಿಪ್ರಾಯವನ್ನು ಅರಿಯದೆ ಪೋಷಕರು ಮಕ್ಕಳಿಗೆ ಕೇಳದೆ ನಮಗೆ ಮನ ಬಂದಂತೆ ನಾವು ದಾಖಲಾತಿ ಮಾಡುತ್ತೇವೆ, ಹೀಗೆ ಮಾಡುವುದರಿಂದ ನಮ್ಮ ಮಕ್ಕಳ ಭವಿಷಕ್ಕೆ ನಾವೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾಡಿ ಸುಮ್ಮನಾಗುತ್ತೇವೆ ಇದರಿಂದ ಮಕ್ಕಳು ಒಂದು ಕಡೆ ವಿದ್ಯಾಭ್ಯಾಸವು ಸರಿಯಾಗಿ ಮಾಡದೆ ಸರಿಯಾದ ಉದ್ಯೋಗ ಸಿಗದೇ ತನ್ನ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲಾಗದೆ ಅರ್ದಕ್ಕೆ ನಿಂತು ಬಿಡುತ್ತಾರೆ ನಂತರ ಜೀವನ ಹೇಗೆ ನಡೆಯುತ್ತೋ ಹಾಗೆ ಜೀವನವನ್ನು ಕಳೆಯಲು ಪ್ರಾರಂಭ ಮಾಡುತ್ತಾರೆ, ಆದ್ದರಿಂದ ನಾವು ಅಂದರೆ ಪೋಷಕರು ತೆಗೆದುಕೊಳ್ಳುವ ನಿರ್ಧಾರಕ್ಕೂ ಮುಂಚೆ ನಮ್ಮ ಮಕ್ಕಳ ಅಬಿಪ್ರಾಯವನ್ನು ಸಹ ನಾವು ತೆಗೆದುಕೊಂಡು ಅದಕ್ಕೆ ತಕ್ಕಂತೆ ಭವಿಷ್ಯ ರೂಪಿಸಲು ಸಹಕಾರ ಮಾಡಬೇಕಾಗುತ್ತದೆ, ಆಗ ಮಕ್ಕಳು ಸ್ವತಂತ್ರವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.

ಅಂದ ಹಾಗೆ ನಾವು ನಮ್ಮ ವಿಸ್ಮಯ ಕಲಿಕೆ ಕೇಂದ್ರದಲ್ಲಿ ಕಳೆದ ಎರಡು ವರ್ಷದಿಂದ ಬೇರೆ ಬೇರೆ ವಯಸ್ಸಿನ ಮಕ್ಕಳ ಜೊತೆ ನಾವು ಸಮಯವನ್ನು ಕಲಿಕೆಯಲ್ಲಿ ಕಳೆಯುತಿದ್ದೇವೆ ಅದರಲ್ಲಿ ಮಕ್ಕಳಿಗಾಗಿ ಕಲಿಕೆಯಲ್ಲಿ ಆಸಕ್ತಿದಾಯಕ ಕಲಿಕೆ, ಕೌಶಲ್ಯಭರಿತ ಕಲಿಕೆ ಮತ್ತು ಉತ್ಸಾಹಭರಿತ ಕಲಿಕೆ ಕಲಿಯುವುದು ಹೇಗೆ ಮತ್ತು ಕಲಿಸುವುದು ಹೇಗೆ ಎಂದು ನೋಡಿದಾಗ ನಾವು ಕೆಲವು ಮಕ್ಕಳ ಜೋತೆ ಕಲಿಕೆಯ ವಿಧಾನದಲ್ಲಿ ಕಲಿಸಿದಂತಹ ಚಟುವಟಿಕೆಗಳು ಮತ್ತು ಅವರಿಗೆ ಆಸಕ್ತಿ ಮುಡಿಸಿದ ಕಲಿಕೆಯ ಅನುಭವವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇವೆ.

ನಾವು ಪ್ರಾಥಮಿಕ ಹಂತದಲ್ಲಿ ಚಿಕ್ಕ ಮಕ್ಕಳಿಗೆ ಕನ್ನಡ ವರ್ಣಮಾಲೆ ಹೇಳು ಎಂದರೆ ಅವರು ಹೇಳುವುದಿಲ್ಲಾ ಏಕೆಂದರೆ ಅದಕ್ಕೆ ವರ್ಣಮಾಲೆ ಎಂದರೇನು ಎಂಬುದು ಗೊತ್ತಿಲ್ಲ ಅದಲ್ಲದೆ ಅಕ್ಷರಗಳು ಹೇಗಿರುತ್ತವೆ ಎಂಬುದನ್ನು ತಕ್ಷಣವಾಗಿ ಕಂಡು ಹಿಡಿಯಲು ಸ್ವಲ್ಪ ಕಷ್ಟ ಎಂದು ಅನಿಸುತ್ತದೆ ಹಾಗಾಗಿ ಮಕ್ಕಳಿಗೆ ಮೊದಲು ತನ್ನ ಪರಿಸರದಲ್ಲಿ ತಾನು ವಾಸಿಸುವ ಜಾಗದಲ್ಲಿ ಇರುವಂತಹ ಪರಿಸರವನ್ನು ತಿಳಿದುಕೊಳ್ಳಲು ಬಿಡಬೇಕಾಗುತ್ತದೆ, ಮಕ್ಕಳು ನಮ್ಮ ಮನೆಯ ಸದಸ್ಯರು ಪ್ರತಿದಿನ ನೋಡುವಂತಹ ಮತ್ತು ವಾಸಿಸುವ ಪರಿಸರದಲ್ಲಿ ನಡೆಯುವಂತಹ ಚಟುವಟಿಕೆಗಳನ್ನು ಗಮನಿಸಿ ನಂತರ ಮಕ್ಕಳು ಉಚ್ಚಾರಣೆ ಮಾಡುವುದು ನಂತರ ಅದನ್ನು ಪ್ರಯೋಗ ಮಾಡುವುದಕ್ಕೆ ಮುಂದಾಗುತ್ತದೆ, ಹೀಗೆ ಯಾವ ವಸ್ತುವನ್ನು ಏನೆಂದು ಕರೆಯುತ್ತಾರೆ, ಯಾವ ಗಿಡಕ್ಕೆ ಏನು ಹೆಸರಿದೆ ಎಂದು ದಿನನಿತ್ಯದ ಬದುಕಿನಲ್ಲಿ ಮಗು ಕಲಿಯುತ್ತ ಹೋಗುತ್ತದೆ, ಹಾಗಾಗಿ ಪ್ರಾಥಮಿಕ ಹಂತಕ್ಕೆ ಶಾಲೆಗೆ ಬಂದಾಗ ಅದು ಬೇಗನೆ ಅದನ್ನು ಅರ್ಥೈಸಿಕೊಳ್ಳಲು ಪ್ರಾರಂಭ ಮಾಡುತ್ತದೆ ಹಾಗೆಯೇ ಮನೆಯ ಒಳಗೆ ನಡೆದಂತಹ ಪ್ರತಿಯೊಂದು ಕಲಿಕೆಯು ಸಹ ಒಂದು ಶಿಕ್ಷಣದ ವ್ಯವಸ್ಥೆ ಆಗಿದೆ ಎಂದು ಹೇಳಬಹುದು. ಏಕೆಂದರೆ ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮಕ್ಕಳು ಕೌಶಲ್ಯಭರಿತವಾಗಿ ಕಲಿಯಲು ಸಹಾಯವಾಗುತ್ತದೆ.

ನಮ್ಮ ವಿಸ್ಮಯ ಕಲಿಕೆಯ ಕೇಂದ್ರದಲ್ಲಿ ಒಂದು ಚಿಕ್ಕ ಪ್ರಯೋಗವನ್ನು ಮಾಡಲಾಗಿತ್ತು ಅದು ಕರ್ನಾಟಕ ಸರ್ಕಾರ ಶಾಲೆಗಳಲ್ಲಿ ಕಲಿಯಲು ರ ಗ ಸ ದ ಅ ವನ್ನು ವರ್ಣಮಾಲೆ ಕಲಿಯುವುದರ ಜೊತೆಗೆ ಕಲಿತರೆ ಮಕ್ಕಳ ಉಚ್ಚಾರಣೆ ಶಕ್ತಿ ಹೆಚ್ಚುತ್ತದೆ ಹಾಗು ಮಕ್ಕಳು ಬೇಗ ಕಲಿಯುವುದಕ್ಕೆ ಸಹಾಯವಾಗುತ್ತದೆ, ಅದನ್ನು ನಾವು ಸಹಕಾರ ಗೊಳಿಸುವ ಸಲುವಾಗಿ ಕೆಲವು ದೈಹಿಕ ಚಟುವಟಿಕೆಗಳು ಇನ್ನು ಕೆಲವು ಮಾನಸಿಕ ಚಟುವಟಿಕೆಗಳನ್ನು ಹಾಕಿಕೊಂಡಿದ್ದೆವು ನಾವು ಮೊದಲಿಗೆ ವರ್ಕ್ ಶೀಟ್ ಗಳನ್ನೂ ಕೊಡುತಿದ್ದೆವು ಮಕ್ಕಳು ಪ್ರಾರಂಭದಲ್ಲಿ ಅದನ್ನು ತುಂಬಾ ಇಷ್ಟಪಟ್ಟು ತೆಗೆದುಕೊಂಡು ಬರೆಯಲು ಮುಂದಾದರು ಆದರೆ ಅದರಲ್ಲಿ ನಾವು ಗಮನಿಸಿದಾಗ ಯಾವ ವರ್ಕ್ ಶೀಟ್ ಗಳಲ್ಲಿ ಚಿತ್ರಗಳು ಇರುತಿತ್ತೋ ಅದನ್ನು ಹೆಚ್ಚಾಗಿ ತೆಗೆದುಕೊಳ್ಳುತಿದ್ದರು ಮತ್ತೆ ಹಾಗೆ ಕೇವಲ ಅಕ್ಷರ ಇರುವ ವರ್ಕ್ ಶೀಟ್ ಗಳನ್ನೂ ಮಕ್ಕಳು ಮುಟ್ಟುತ್ತಿರಲಿಲ್ಲ ಆಗ ಇದನ್ನು ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಮಕ್ಕಳು ಇಷ್ಟಪಡುವಂತಹ ಮತ್ತು ಕೌಶಲ್ಯಭರಿತ ಚಟುವಟಿಕೆ ಮಾಡಬೇಕು ಎಂದು ಮತ್ತೆ ನಾವು ಕೆಲವು ಬ್ಲಾಕ್ಸ್ ಗಳನ್ನೂ ಮಾಡಿದ್ದೆವು ಇದನ್ನು ಮಕ್ಕಳಿಗೆ ಮಾಡಲು ಹೇಳಿದ್ದೆವು ಎಷ್ಟು ಅದ್ಬುತವಾಗಿ ಬಂತು ಎಂದರೆ ನಾವು ಮಕ್ಕಳ ಜೊತೆ ಕೂತುಕೊಂಡು ಇಂತಹ ಚಟುವಟಿಕೆಗಳನ್ನು ಮಾಡುವಾಗ ಮಕ್ಕಳ ಜೊತೆ ಸಮಯ ಹೇಗೆ ಕಳೆಯುತ್ತಿತ್ತು ಎಂಬುದು ಸಹ ಗೊತ್ತಾಗುತ್ತಿರಲಿಲ್ಲ ಆದರೆ ನಾವು ಮಾಡಿದ್ದ ಈ ಚಟುವಟಿಕೆಯಲ್ಲಿ ಮಕ್ಕಳು ಕಾರ್ಡ್ ಬೋರ್ಡ್ ಶೀಟ್ ತೆಗೆದುಕೊಂಡು ಅದನ್ನು ಸಮನಾಗಿ ಕತ್ತರಿಸಿ ಅದಕ್ಕೆ ಸರಿಯಾದ ರಿತಿಯಲ್ಲ್ಲಿ ಒಂದು ಆಕಾರ ಕೊಟ್ಟು ಅದರ ಮೇಲೆ ಮಾರ್ಕರ್ ನಿಂದ ರ ಗ ಸ ದ ಅ ವನ್ನು ಒಂದೊಂದು ಬಾಕ್ಸ್ ಮೇಲೆ ಬರೆಯುತಿದ್ದರು, ಅದು ನೋಡುವುದಕ್ಕೆ ಎಷ್ಟು ಅಂದವಾಗಿ ಕಾಣುತಿತ್ತೋ ಅದನ್ನು ಆಟ ಆಡುವುದಕ್ಕೂ ಸಹ ಅಷ್ಟೇ ಚಂದವಾಗಿ ಕಾಣುತಿತ್ತು, ಹಾಗು ನಾವು ತಯಾರಿಸಿದ್ದ ಬಾಕ್ಸ್ ಗಳು ಕೇವಲ ಬಾಕ್ಸ್ ಆಗಿರಲಿಲ್ಲ ಅದರಲ್ಲಿ ಕೆಲವು ಆಟಗಳು ಸಹ ಇದ್ದವು, ಈ ಆಟ ಆಡುವಾಗ ಮಕ್ಕಳು ಕಲಿಕೆಯನ್ನು ಸಹ ಆಟದ ಜೊತೆಗೆ ತೆಗೆದುಕೊಂಡು ಹೋಗುತಿದ್ದರು ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳಲ್ಲಿ ಚುರುಕುತನವನ್ನು ಮುಡಿಸುತ್ತದೆ ಇದರಿಂದ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತಿತ್ತು ಅದರ ಜೊತೆಗೆ ಉತ್ಸಾಹ ಕೂಡ ಜಾಸ್ತಿ ಆಗುತಿತ್ತು ಇದರಿಂದ ಮಕ್ಕಳಿಂದ ಮಕ್ಕಳಿಗೆ ನಾವು ಬದಲಾವಣೆಯನ್ನು ಕಾಣುತಿದ್ದೇವು.

ಹಾಗೆ ನಾವು ಮಾಡಿದ ಚಟುವಟಿಕೆಯ ಜೊತೆಗೆ ಇನ್ನೊಂದು ಚಟುವಟಿಕೆಯನ್ನು ಕೈಗೊಂಡೆವು ಅದು ಸಹ ಮಕ್ಕಳಲ್ಲಿ ಸ್ವತಂತ್ರವಾಗಿ ಹಾಡಿ ಆಡಿ ಕುಣಿದು ಕುಪ್ಪಳಿಸಿ ತಮ್ಮ ಮನಸ್ಸಿಗೆ ಆನಂದ ಕೊಡುವಂತಹ ಚಟುವಟಿಕೆಯನ್ನು ಕೈಗೊಂಡೆವು ಅದು ಈ ಹಿಂದೆ ಮಾಡಿದ ಚಟುವಟಿಕೆಗಿಂತ ಸ್ವಲ್ಪ ಭಿನ್ನವಾಗಿ ಮಾಡಲಾಗಿತ್ತು ಪ್ರಾರಂಬದಲ್ಲಿ ಎರಡು ಮೂರೂ ಜನ ಈ ನೃತ್ಯವನ್ನು ಪ್ರಾರಂಬಿಸಿದ್ದರು ಯಾವಾಗ ಬೇರೆ ಮಕ್ಕಳು ಅವರು ಮಾಡುವ ನೃತ್ಯವನ್ನು ನೋಡಿದರೋ ಅದನ್ನು ನೋಡಿದ ನಂತರ ಇನ್ನು ಕೆಲವು ಮಕ್ಕಳು ನಾವು ಈ ನೃತ್ಯವನ್ನು ಮಾಡುತ್ತೇವೆ ಎಂದು ಎಲ್ಲಾ ಮಕ್ಕಳು ಭಾಗವಹಿಸಲು ಮುಂದಾದರು ಹೀಗೆ ನಾವು ಮಕ್ಕಳನ್ನು ಸಂತೋಷವಾಗಿ ಆಟ ಆಡುತ್ತ ಕುಣಿಯುತ್ತ ಕಲಿಯಬೇಕೆಂದರೆ ಇಂತಹ ಚಟುವಟಿಕೆಗಳು ತುಂಬಾ ಅವಶ್ಯಕತೆ ಆಗಿದೆ ಇದರಿಂದ ಮಕ್ಕಳು ಮಾನಸಿಕವಾಗಿ ಶಿಕ್ಷಣದಲ್ಲಿ ಪ್ರಗತಿ ಹೊಂದಲು ಹಾಗು ದೈಹಿಕವಾಗಿ ಅಬಿವೃದ್ದಿ ಹೊಂದಲು ಸಹಕಾರಿಯಾಗುತ್ತದೆ.

ಈ ರೀತಿಯಾಗಿ ನಾವು ಮಾಡುವಂತಹ ಚಟುವಟಿಕೆಗಳು ಒಂದಕ್ಕೊಂದು ಜೋಡಣೆ ಇದ್ದು ಅದು ಹಂತ ಹಂತವಾಗಿ ಮಕ್ಕಳಿಗೆ ಕಲಿಯಲು ಸಹಕಾರಿಯಾಗುವಂತಹ ಚಟುವಟಿಕೆಗಳನ್ನು ಮಾಡುವುದರಿಂದ ಯಾವುದೇ ವಯಸ್ಸಿನ ಮಕ್ಕಳಿಗೂ ಸಹ ಕಲಿಯಲು ಆಸಕ್ತಿ ಬರುತ್ತದೆ ನಾವು ಶಾಲೆಯ ಕೊಠಡಿಯ ಒಳಗೆ ಕಲಿಯುವ ಕಲಿಕೆಯಿಂದ ನಾಲ್ಕು ಗೋಡೆಯ ಹೊರಗೆ ಕಲಿಯುವ ಕಲಿಕೆ ಬೇಗ ಹಾಗು ಹೆಚ್ಚಿನ ಮಟ್ಟದಲ್ಲಿ ಅರ್ಥ ಆಗುತ್ತದೆ ಹಾಗಾಗಿ ನಮ್ಮ ಮಕ್ಕಳಲ್ಲಿ ಪ್ರಾರಂಬದಲ್ಲಿ ಇದ್ದ ಕಲಿಕೆಗಿಂತ ಹೊಸ ಹೊಸ ವಿದಾನದಲ್ಲಿ ಕಲಿಯುವ ಕಲಿಕೆ ಹೆಚ್ಚಿನ ಆಕರ್ಷಕವಾಗಿರುತ್ತದೆ ಹೀಗಾಗಿ ನಾವು ಮಾಡುವ ಪ್ರತಿಯೊಂದು ಚಟುವಟಿಕೆಯು ಸಹ ಯಶಸ್ಸು ಕಾಣುತ್ತೆ ಅನ್ನುವುದಕ್ಕಿಂತ ಮಕ್ಕಳಿಗೆ ಸಂತೋಷದಿಂದ ಕಲಿಯುವುದಕ್ಕೆ ಸಾದ್ಯಾ ಆಗುತ್ತಿದೆಯೇ ಎಂಬುದನ್ನು ನಾವು ನೋಡಬೇಕಾಗುತ್ತದೆ.

11 views0 comments

Recent Posts

See All
Post: Blog2_Post
bottom of page